Sunday, March 28, 2010

ಓ ಒಲವೆ

ಬಾನಂಗಳದ ಅಂಚಿನಲ್ಲಿ ನಿಂತೆನು ನಿನ್ನ ಮೊಗವ ಕಾಣಲು
ಚಂದಿರನ ಹೊಂಬೆಳಕಿನಲ್ಲಿ ಹುಡುಕಾಡಿದೆನು ನಿನ್ನ ಮೊಗವ ಕಾಣಲು
ಕಾಮನ ಬಿಲ್ಲಿನ ಬಣ್ಣದ ಹಾಗೆ ಹರಡಿದೆನು ನಿನ್ನ ಮೊಗವ ಕಾಣಲು
ಹೂವಿನ ಪರಿಮಳವನು ಹುಡುಕಾಡುವ ದುಂಬಿಯಂತೆ ಹಾರಾಡಿದೆನು ನಿನ್ನ ಮೊಗವ ಕಾಣಲು
ಹಕ್ಕಿಯಂತೆ ಹಾರಾಡುತ ಮೋಡದ ಹಾಗೆ ಚಲಿಸಿದೆನು ನಿನ್ನ ಮೊಗವ ಕಾಣಲು
ಹರಿಯುವ ಜೀವ ನದಿಯಂತೆ ಸಾಗಿದೆನು ನಿನ್ನ ಮೊಗವ ಕಾಣಲು
ಓ ಒಲವೆ, ಈ ಜೀವ ಕಾದಿಹುದು ನಿನ್ನ ನಗೆಯ ಕಾಣಲು :)

No comments:

Post a Comment