Thursday, July 29, 2010

ಮನ ಮೆಚ್ಚಿದ ಮನಾಲಿ

Beautiful Manali

ಬೆಳ್ಳಿಯ ಮೋಡದಲಿ ಮುಳಿಗಿರುವ ಮನಾಲಿ,
ಹೂವಿನ ಮಡಿಲಲಿ ಮಗುವಾಗಿ ತೂಗಿದ ಇಬ್ಬನಿಯ ಜೋಕಾಲಿ,
ಹಸಿರು ತೋರಣದಂತೆ ಶೋಭಿಸುವ ನಿಲುವಾದ ಗಿಡ ಮರಗಳು,
ಹಸಿರಿಂದ ಕೆಂಪಾದ ಸೇಬು ಹಣ್ಣಿನ ಗೊಂಚಲುಗಳು.

ರಭಸದಿಂದ ಹರಿಯುವ ಭ್ಯಾಸ್ ಹೊಳೆ,
ಮೂರು ಹಂತದ ಗೋಪುರದಲ್ಲಿ ಪೂಜಿತಲಾದ ಹಿಡಿಂಬ ದೇವಿ,
ನಿಲುವಗಂಬದೊಂದಿಗೆ ಎಲ್ಲರಿಗೂ ದರ್ಶಿತನಾದ ಗಟೂಜ್ಗಜ,
ಎಂದಿಗೂ ಮುತ್ತಿನ ಹನಿಗಳೊಂದಿಗೆ ಅಲಂಕೃತ ನಾಡು.

ಪ್ರವಾಸಿಗರ ಮನದೌತಣ ಮನಾಲಿ,
ನವ ದಂಪತಿಗಳ ಶೃಂಗಾಲಯ ಮನಾಲಿ,
ತಂಪು ತಂಗಾಳಿಯ ಬೀಡು ಮನಾಲಿ,
ಮೈ ಮನ ಮರೆಸುವುದು ಮನಾಲಿ.

ದೇವರ ಕನಸು

Incredible Ladakh!!!

ದೇವರ ಕನಸಲ್ಲಿ ಮೂಡಿದ್ದು,
ಮಾನವನ ಕಣ್ಣಿಗೆ ಕಂಡಿದ್ದು,
ಸ್ವರ್ಗವು ಸೃಷ್ಟಿ ಆಗಿದ್ದು,
ಹಿಮಪರ್ವತಗಳ ಹಿಮಬಿಂದು ಹಿಮಾಲಯ.

ಸಾಲುಸಾಲಾಗಿ ನಿಂತಿರುವ ಹಿಮಪರ್ವತಗಳು,
ತವರೂರಿಂದ ಸಾಗಿದ ಜಲಧಾರೆಗಳು,
ಯಾತ್ರಿಕರಿಗೆ ವಿಸ್ಮಯವೆನಿಸುವ ಕಣಿವೆಗಳು,
ಸಾಯುವ ಮುನ್ನ ನೋಡಲೆಬೇಕೆನಿಸುವ ಹಿಮಾಲಯ.

ವರ್ಣಗಳೊಂದಿಗೆ ತನ್ನನ್ನು ವರ್ಣಿಸುವ ನಾಲೆ ಪ್ಯಾಂಗಾಂಗ್,
ಅತಿ ಎತ್ತರದ ಸಂಚಾರಿ ಪರ್ವತವೆಂದು ಕರೆಯುವ ಕರ್ದುಂಗ್ಲಾ,
ಗಡಿಭದ್ರತಾ ಕೇಂದ್ರಾಲಯ ಲಧಾಖ್,
ಲೇ ಲೇ, ಈ ಸೊಬಗಿಗೆ ನಾನು ಪಾಲಾಗುವೆ ಎನ್ನುತ "ಲೇಹ್".