Monday, October 18, 2010

ಪ್ರೀತಿಯ ವಿಧಾಯ

This poem is based on true love story. I have narrated the feelings in poetic way :)

ನಿನ್ನ ಪರಿಚಯದಿಂದ ಬೆಳದಿಂಗಳಾಯಿತು,
ನಿನ್ನ ಸ್ಪರ್ಶ ಮಂಜಿನಂತೆ ಕರಗಿತು,
ನಿನ್ನೊಡನೆ ನಡೆ ಸಿಹಿ ನೆನಪಾಯಿತು,
ನಿನ್ನ ಕೈ ತುತ್ತು ಕರಗಿಹೋಯಿತು!

ನನ್ನ ಕಿರು ನಗೆಯೆಂದು ನಿನ್ನಿಂದಲೇ,
ತಿಳಿಯದ ಲೋಕವ ಅರಿಯದ ಭಾವವ ಸವಿದೆನು ನಿನ್ನಿಂದಲೇ,
ಪ್ರೇಮಿಯನ್ನ ಹುಡುಕಲು ಹೋಗಿ ಪ್ರೀತಿಯನ್ನೇ ಕಂಡೆನು ನಿನ್ನಿಂದಲೇ,
ತನು ಮನ ಸಮ್ಮಿಲನವಾಗಲಿ ನಿನ್ನಲ್ಲೇ ನಿನ್ನಿಂದಲೇ!

ಕಣ್ಣ ಬಿಂಬದಲ್ಲೇ ಉಳಿದು ಬಿಡು ಚಿನ್ನ,
ನಿನ್ನ ಮಾತಲ್ಲಿ ಮರೆಯುವೆ ನನ್ನ,
ನಿನ್ನ ಹಾಡಲ್ಲಿ ಜೀವಿಸುವೆ ಇನ್ನ,
ಕೈ ಹಿಡಿದು ನಡೆಸು ಎನ್ನ!

ಮಾತೊಂದ ಹೇಳಬೇಕಿತ್ತು,
ಮಾತು ಮುತ್ತಾಗಿ ಮನಸಲ್ಲೇ ಅಡಗಿತು,
ನನ್ನ ಹೃಮಿಡಿತದ ಭಾವ ತಿಳಿಸಬೇಕಿತ್ತು,
ಹೃದಯ ಸ್ತಬ್ದವಾಗಿ ಹೋಯಿತು!

ವಿದಾಯದ ಕಣ್ಣಿರ ಮಳೆಯು ಮರೆಮಾಚಿತು,
ಆದರೆ ನನ್ನ ಹೃದಯ ಬಿಟ್ಟು ಹೋಗಬೇಕಾಯಿತು,
ರೆಪ್ಪೆಯಾಡುವ ಸಮಯವೂ ನಿನ್ನ ಅಗಲಿಕೆ ಸಹಿಸಲಾರೆನು,
ಕೊನೆಗೂ ಮನದಾಳದ ಮಾತನ್ನು ಹೇಳದೆ ಹೋಗುತಿಹೆನು!

ನಿನಗಾಗಿ ನಾನೆಂದೂ ಕಾಯುವೆ ನನ್ನೋಲುವೆ!!

Thursday, October 14, 2010

ಬೀಳ್ಕೊಡುಗೆ

farewell to my friend.

ಹಕ್ಕಿಯು ಗೂಡಿನಿಂದ ಹಾರಿದರೂ,
ಸಮುದ್ರದ ಅಲೆಯು ದಂಡೆಗೆ ಅಪ್ಪಳಿಸಿದರೂ,
ಪ್ರೀತಿಯು ಹೃದಯದಿಂದ ಜಾರಿದರೂ,
ನೀನು ನನ್ನ ಕಣ್ಣರಿವಿಗೆ ದೂರವಾದರೂ,
ಎಲ್ಲವೂ ತಮ್ಮ ಮನೆಗೆ ಸೇರಲೇಬೇಕು,
ನನ್ನ ನಿನ್ನ ಸ್ನೇಹ ಸ್ಥಿರವಾಗಿರಬೇಕು.