Sunday, June 13, 2010

ನಿನಗಾಗಿ ನಾನು

The love of a flower & a leaf in the plant.

ನಿನ್ನಂತೆಯೇ ನಾನು, ನನ್ನಂತೆಯೇ ನೀನು,
ಪ್ರೀತಿಯ ಬಳ್ಳಿಯಲ್ಲಿ ಮೂಡಿತು ನಮ್ಮಿಬ್ಬರ ಒಲವು,
ಬಳ್ಳಿಯ ಹೂವಾಗಿ ನೀನು, ಆಸರೆಯ ಎಲೆಯಾಗಿ ನಾನು,
ಬೆಳೆಯಿತು ಪ್ರೀತಿಯ ಚಿಗುರು, ಮೊಳೆಯಿತು ಕನಸಿನ ಅರಿವು.

ದುಂಬಿಯ ಸೋಜುಗನ ಕಂಡು ವಿರಹವಾಯಿತು,
ಸೋಜುಗನ ಸೂಜಿಯನ್ನ ಕಡೆದಾಯಿತು,
ಆನಂದದ ಹೊನಲಿನಲ್ಲಿ ನಮ್ಮಿಬರ ಜೀವನವಿತ್ತು,
ಕಣ್ಸೆಳೆದ ಮೊಜುಗಾರನ ಕೈಯಲ್ಲಿ ಸೆರೆಯಾಯಿತು.

ಇದೆಂಥ ನ್ಯಾಯವೆಂದು ದೇವರಲ್ಲಿ ಮೊರೆಯಿಟ್ಟೆನು,
ನಾನಿಲ್ಲದೆ ಹೂವಿಲ್ಲ, ಹೂವಿಲ್ಲದೆ ನಾನಿರಲಾರೆನು,
ಮುಡಿದ ಹೂ ಉರುಳಿತೆಂದು, ಗೊಗೆರೆದೆನು,
ಅರಳಿದ ಹೂ, ಬೆಳೆದ ಜೀವನವಿಲ್ಲ ಎಂದು ಉರುಳಿಹೊದೆನು.

No comments:

Post a Comment