Sunday, March 14, 2010

ಓ ಪ್ರಕೃತಿಯೇ

My first poetry  :) I have written this sitting on top view point of Kemmannu Gundi.

ಓ ಪ್ರಕೃತಿಯೇ,
ಒಂದು ಹೆಣ್ಣಿನ ಅಂದವನ್ನು  ವರ್ಣಿಸಲು
ನಿನ್ನೊಂದಿಗೆ  ಹೋಲಿಸಿ  ಹೇಳುವೆ , ಆದರೆ
ನಿನ್ನಂದವ  ನಾ  ಯಾರಿಗೆ  ಹೊಲಿಸಲಿ ..!
ನಿನಗೆ  ನೀನೆ  ಸರಿಸಾಟಿ .

ಹಚ್ಚ  ಹಸಿರಿನ  ಹಾಸಿಗೆಯನ್ನ  ಹಾಸಿ ,
ಮುಸ್ಸಂಜೆ  ಮಂಜಿನ  ಮೋಡಗಳನ್ನ ಮದಿಸಿ,
ತಂಪಾದ  ತುಸು  ತಂಗಾಳಿಯನ್ನ  ತಾಕಿಸಿ ,
ಬೆಳದಿಂಗಳ  ಬೆಳ್ಳಿಯ  ಬೆಳಕನ್ನ  ಬಾಗಿಸಿ ,
ಅಮ್ಮನಂತೆ  ನಿನ್ನ  ಮಡಿಲಿನಲ್ಲಿ  ಲಾಲಿ  ಹಾಡುತ  ಮಲಗಿಸಿದೆ .

ಮುಂಜಾನೆಯಲ್ಲಿ  ಸೂರ್ಯನು  ನಗುನಗುತ್ತ  ಉದಯಿಸಿದನು,
ಶತಕೋಟಿ  ಜೀವ  ರಾಶಿಗಳ  ಬದುಕಿನಲಿ  ಬೆಳಗಿದನು ,
ಮುಂಜಾನೆಯ  ಹೊಂಗಿರನಗಳೊಂದಿಗೆ  ನನ್ನ  ಕೈ  ಹಿಡಿದು  ನಡೆಸಿದನು ,
ಪ್ರಕೃತಿಯ  ಸೊಬಗನ್ನು  ತನ್ನೊಂದಿಗೆ  ತೋರಿಸಿದನು .


ಸಮುದ್ರದ  ಅಲೆಗಳಂತೆ  ನಿಂತಿರುವ  ಬೃಹದಾಕಾರದ  ಬೆಟ್ಟಗಳು ,
ಯುದ್ಹದ ಸೇನೆಯಂತೆ  ಚಲಿಸುವ  ಮೋಡಗಳು,
ಹಸಿವನ್ನು  ಉಸಿರನು  ನೀಗಲು  ನಾವಿರುವೆನೆನ್ನುವ  ಗಿಡ  ಮರಗಳು,
ಜೀವ  ಉಳಿಸುವ  ಸಂಜೀವಿನಿಯಂತೆ  ಹರಿಯುವ  ಜಲಧಾರೆಗಳು ,
ಸ್ವಗ್ರದ  ವೈಭೋಗವನ್ನು  ತೋರಿದ ಕೆಮ್ಮನ್ನುಗುಂದಿಯೇ  ನಿನಗೆ  ವಂದನೆಗಳು.

No comments:

Post a Comment