Saturday, March 13, 2010

ದೀಪಾವಳಿ ಹಬ್ಬದ ಶುಭಾಶಯಗಳು

Deepavali Best Wishes

"ದೀಪಗಳ ಹಬ್ಬ, ಮನೆಯಂಗಳದಲ್ಲಿ ದೀಪಗಳ ಸಾಲಿನ ಹಬ್ಬ,
ತೋರಣದ ಹಬ್ಬ, ಹಸಿರು ಮಾವಿನ ತೋರಣದಿಂದ ಅಲಂಕರಿಸುವ ಹಬ್ಬ,
ವ್ರತದ ಹಬ್ಬ, ಲಕ್ಷ್ಮಿ ವ್ರತ ವಿಧಾನಗಳನ್ನು ಆಚರಿಸುವ ಹಬ್ಬ,
ಸಂಭ್ರಮದ ಹಬ್ಬ, ಕಜ್ಜಾಯ ತಿಂದು ಪಟಾಕಿ ಹೊಡೆದು ಸಂಭ್ರಮಿಸುವ ಹಬ್ಬ.

ದೀಪದ ದ್ವೀಪದಲ್ಲಿ ಕತ್ತಲೆಯನ್ನು ಅಡಗಿಸಿ,
ಜಗತ್ತಿಗೆ ನವೋದಯವನ್ನು ಮೂಡಿಸಿ,
ಮನೆ ಮನ ಮುಖದ ಛಾಯೆಯನ್ನು ಬೆಳಗಿಸಿ,
ಸಂತೋಷದಿಂದ ಸಿಹಿಯನ್ನು ಹಂಚುತ ಸಂಭ್ರಮಿಸುವುದೇ ದೀಪಾವಳಿ.

ಸಂಜೆಯಾದಂತೆ ಕತ್ತಲೆಯು ಆವರಿಸುವುದು,
ದೀಪಾವಳಿಯಂದು ಬೆಳಕೊಂದೆ ಉಳಿಯುವುದು,
ವರ್ಷವಿಡಿ ಕಷ್ಟ ಸುಖ ಕಾಡುವುದು,
ದೀಪಾವಳಿಯಂದು ಸಂತೋಷವೊಂದೆ ಉಳಿಯುವುದು,
ಜೀವನ ಬಂಧು ಮಿತ್ರರಲ್ಲಿ ಕಲಹ ತರುವುದು,
ದೀಪಾವಳಿಯಂದು ಸ್ನೇಹ ಭಾನ್ಧವ್ಯವೊಂದೆ ಉಳಿಯುವುದು."

No comments:

Post a Comment