Thursday, March 18, 2010

ಪ್ರೀತಿಯ ವೇದನೆ

The feel of a guy when he failed in Love.

ನಿನ್ನ ನೆನೆಯದ ದಿನವಿಲ್ಲ,
ಮರೆತರೆ ನನ್ನ ಪ್ರಾಣವಿಲ್ಲ,
ನಿನ್ನ ಪ್ರೀತಿಯಲ್ಲಿ ಕರಗಿಹೋಗಿರುವೆನಲ್ಲ,
ಒಮ್ಮೆಯಾದರು ನಿನಗೆ ನನ್ನ ನೆನಪಿಲ್ಲವಲ್ಲ.

ನಾ ಮಾಡಿದ ತಪ್ಪಾದರೂ ಏನು,
ನನ್ನ ಬಿಟ್ಟು ಹೋಗಿರುವೆ ನೀನು,
ತಾಳಲಾರೆ ಈ ಹೃದಯ ವೇದನೆಯನು,
ಕೊಡುವೆಯ ಪ್ರೀತಿಯ ಅಮೃತವನ್ನು.

ಪ್ರೀತಿಯ ಅರ್ಚನೆಗೆ ಹೂಗಳಂತೆ ನೀನು,
ಆ ಹೂವನ್ನು ಬೇಡುವೆ ವರವಾಗಿ ನಾನು,
ನೀ ಎಲ್ಲಿದ್ದರು ಕ್ಷೇಮವಾಗಿರಬೇಕೆಂದು ಕೋರುವೆನು,
ಒಮ್ಮೆಯಾದರು ನಿನ್ನ ನೋಡಬೇಕೆಂದು ಬಯಸುವೆನು.

1 comment: