I want to tell this when I see my dream girl :)
ಕಂಡೆನು ನನ್ನ ಕನಸಿನ ಜೀವ,
ಮೊದಲಾಯಿತು ಹೃದಯ ಮಿಡಿತತ ಭಾವ.
ನನ್ನೊಲುಮೆಯ ಭಾವನೆಗಳನು ತುಂಬಿ ನಿಂತಳು,
ಅವಳೇ ನನ್ನ ಕನಸಿನ ಯುವರಾಣಿ ಆದಳು.
ನಿನ್ನಂದವ ಕಂಡು ಬೆರಗಾದೆನು,
ತುಸು ಮಾತಾಡಬೇಕೆಂದು ಬಯಸಿದೆನು.
ನಿನ್ನ ನಗೆ ಹರುಷದ ಹೊನಲು,
ಆ ನಗೆಯ ಅನುಭವಿಸುವ ಹಮಲು.
ನಿನ್ನ ಕಣ್ಣು ಮಿನುಗುವ ತಾರೆಗಳು,
ಆ ಕಣ್ಣಿನ ನೋಟದಲಿ ನಾ ಕಾಣುವ ಆಸೆಗಳು,
ನಿನ್ನ ನಡೆ ಬಳುಕುವ ಹಂಸದಂತೆ,
ಆ ನಡೆಯ ಜೊತೆ ನಾ ನಡೆಯಬೇಕಂತೆ.
ನಿನ್ನ ಕಂಡಾಗಲೇ ಹೃದಯ ಜಾರುವುದು ಮೆಲ್ಲನೆ,
ಏನೆಂದು ತಿಳಿಯಲಾರೆ ಈ ಪ್ರೇಮದ ಸೂಚನೆ.
Anna...unbelievable poem anna..truly appreciated.
ReplyDeleteheege baritha iru.nimmanthavrinda naavu innu kannadigaru antha helkobahdu..good good..:)
ReplyDelete